ಅಪ್ಪನ ಪ್ಯಾಂಟು, ಅಮ್ಮನ ಲಂಗದ ಗಟ್ಟಿ ಬಟ್ಟೆಯ್ಲಲಿ
ಹೊಲಿದ ಕೈಚೀಲಗಳು ಮೂಲೆ ಕಂಡ್ದಿದೇ ಪ್ಲಾಸ್ಟಿಕ್ ಚೀಲಗಳ ಪ್ರವೇಶದಿಂದ. ಕೈಚೀಲವ್ಲಿಲದೇ ಸಂತೆಗೆ ಹೋಗುವುದೇ
ಪ್ರತಿಷ್ಠೆಯ ವಿಷಯವಾಗಿತ್ತು. ಪರಿಸರ ಕಾಳಜಿ ಇದ್ಲಲಿ ಆ ಹಳೆಯ ಚೀಲಗಳನ್ನೇ ಮತ್ತೊಮ್ಮೆ ಮಡಿಸಿ, ಕೊಂಡೊಯ್ದರೆ ಬಹುತೇಕ
ಸಮಸ್ಯೆ ಇರದೇನೊ... ಆದರೆ ಪ್ಲಾಸ್ಟಿಕ್ ಕಾರ್ಖಾನೆಯ್ಲಲಿರುವವರ ಬದುಕು?
-ಸವಿತಾ ಎಸ್.
ಪ್ಲಾಸಿಕ್ ಚೀಲ... `ಪಾಪ'
`ಕಿರಾಣಿ ಅಂಗಡಿಯ್ಲಲಿ
ಕೊಂಡ್ದಿದು ಅರ್ಧ ಲೀಟರ್ ಹಾಲು ಮತ್ತು ಒಂದು ಕೆಜಿ ಟೊಮೆಟೊ. ಕವರ್ ಬೇಕು ಎಂದ್ದಿದಕ್ಕೆ ಮತ್ತೆರಡು
ರೂಪಾಯಿ ಎಕ್ಸ್‌ಟ್ರಾ ಚಾರ್ಜ್ ಮಾಡೋದೆ'
ಎಂದು ವಯೋವೃದ್ಧರೊಬ್ಬರು ಹುಬ್ಬೇರಿಸ್ದಿದರು.
ರಸ್ತೆ ಕೊನೆಯ ಗೂಡಂಗಡಿಯೇ ಆಗಲಿ ಪ್ರತಿಷ್ಠಿತ ಮಾಲ್‌ಗಳೇ ಆಗಲಿ, ಪ್ಲಾಸ್ಟಿಕ್ ಕವರ್‌ಗಳು
ಉಚಿತವಾಗಿ ಸಿಗುತ್ತ್ಲಿಲ. ೨ರಿಂದ ೭ ರೂಪಾಯಿ ದರ ತೆರಲೇಬೇಕು. ಪರಿಸರ ಸ್ನೇಹಿ ಉತ್ಪನ್ನಗಳಾದ ಪೇಪರ್
ಬ್ಯಾಗ್‌ಗಳನ್ನೇ ಬಳಸಿ ಎಂಬುದು ಇದರ ಹಿಂದಿರುವ ಉದೇಶ. ಆದರೂ ಪ್ಲಾಸ್ಟಿಕ್ ಉತ್ಪಾದನೆಯನ್ನೇ ನಂಬಿರುವ
ನಗರದ ೨೫೦ಕ್ಕೂ ಅಧಿಕ ಫ್ಯಾಕ್ಟರಿಗಳ ೭೫ ಸಾವಿರಕ್ಕೂ ಹೆಚ್ಚು ಮಂದಿಯ ಅತಂತ್ರ ಬದುಕಿನ ಬಗ್ಗೆ ಯಾರೂ
ಚಕಾರವೆತ್ತುತ್ತ್ಲಿಲ. ಆ ಕಾರ್ಮಿಕರ ಪರಿಸ್ಥಿತಿ ಹಾಗೂ ಹಾಳೆ ಚೀಲಗಳ ಬಳಕೆ ನೆಪದ್ಲಲಾಗುವ ಮರಗಳ ಮಾರಣಹೋಮದ
ಬಗ್ಗೆ ಸಿಕ್ಕ ಮಾಹಿತಿ ಇಷ್ಟು...
೨೦೦೫ರ್‍ಲಲಿ ಸುಪ್ರೀಂ ಕೋರ್ಟ್ ೨೦ ಮೈಕ್ರಾನ್ ಮೇಲ್ಪಟ್ಟ ಪ್ಲಾಸ್ಟಿಕ್ ಬಳಕೆ ನಿಷೇಧಿಸಿತ್ತು.
೨೦೧೧ರ್‍ಲಲಿ ಕೈಚೀಲಗಳಾಗಿ (ಕ್ಯಾರಿ ಬ್ಯಾಗ್) ಬಳಸುವ ಕವರ್‌ಗಳು ೪೦
ಮೈಕ್ರಾನ್‌ನ್ದದಾಗಿರಬೇಕು ಎಂದಿತು. ಇಂದು ಸಣ್ಣ ಪುಟ್ಟ ಅಂಗಡಿಗಳ್ಲಲಿ ದಿನಸಿ ಸಾಮಾನಿಗಾಗಿ ಬಳಸುವ
ಬಹುತೇಕ ಪ್ಲಾಸ್ಟಿಕ್ ಕೈಚೀಲಗಳು ೪೦ ಮೈಕ್ರಾನ್‌ನ್ದದು. ಬಟ್ಟೆಯಂಗಡಿಯ್ಲಲಿ ಕೊಡುವ ಪ್ರಿಂಟೆಡ್ ಪ್ಲಾಸ್ಟಿಕ್‌ಗಳು
ಮಾತ್ರ ೬೦ರಿಂದ ೮೦ ಮೈಕ್ರಾನ್ದ್‌ದಾಗಿರುತ್ತದೆ. ಇವೇ ಚೀಲಗಳನ್ನು ಸಾಧ್ಯವ್ದಿದಷ್ಟು ಮರುಬಳಕೆ ಮೂಲಕ
ಪರಿಸರ ಹಾನಿಯನ್ನು ಕಡಿಮೆಗೊಳಿಸಬಹುದು.
ಪ್ಲಾಸ್ಟಿಕ್ ನಿಷೇಧಿಸಿ ಎಂದು ಪರಿಸರ ವಾದಿಗಳು ಕೂಗುವ ಮೊದಲು ನಮ್ಮ ಬದುಕಿನ ಬಗ್ಗೆಯೂ ತುಸು
ಯೋಚಿಸಬೇಕು ಎನ್ನುತ್ತಾರೆ ಅಲಿನ ಕಾರ್ಮಿಕರು. ಇಲಿ ಕೆಲಸ ಮಾಡುವ ಬಹುತೇಕರು ಬಡತನ ರೇಖೆಗಿಂತ ಕೆಳಗಿನ
ಮಟ್ಟದ್ಲಲಿ ಬದುಕುತ್ತಿರುವವರು. ಪರಿಸರ ದಿನಾಚರಣೆ ವೇಳೆಗೆ ಪ್ಲಾಸ್ಟಿಕ್ ನಿಷೇಧ ಕುರಿತ ಪ್ರತಿಭಟನೆಗಳು
ಹೆಚ್ಚಾಗುತ್ತ್ದಿದಂತೆ ಇಲಿನ ಬಡ ಜೀವಗಳು ಕಂಪಿಸುತ್ತವೆ. ಏಕಾಏಕಿ ಪ್ಲಾಸ್ಟಿಕ್ ಬಳಕೆ ನಿಷೇಧಿಸುವ
ಬದಲು ೪೦ ಮೈಕ್ರಾನ್‌ನ್ದದೇ ಬಳಸುವ ಬಗ್ಗೆ ಜನಸಾಮಾನ್ಯರ್‍ಲಲಿ ಅರಿವು ಮೂಡಿಸುವುದು ಒಳಿತ್ಲಲವೇ ಎಂಬುದು
ಸಂಘದ ಅಧ್ಯಕ್ಷ ಸುರೇಶ್ ಎತ್ತುವ ಪ್ರಶ್ನೆ.
ಪರಿಸರ ಇಲಾಖೆಯ ಅಧಿಕಾರಿಗಳು ಪ್ಲಾಸ್ಟಿಕ್‌ಗೆ ಪರ್ಯಾಯವಾಗಿ ಕಾಗದದ ಇಲವೇ ಸೆಣಬಿನ ಚೀಲ ತಯಾರಿಸಿ
ಎನ್ನುತ್ತ್ದಿದಾರೆ. ಒಂದು ಟನ್ ಪೇಪರ್ ತಯಾರಿಸಲು ೨೪ ಮರಗಳನ್ನು ಕಡಿಯಬೇಕು. ಅದರ ತೊಗಟೆಯನ್ನು ನೀರಿನ್ಲಲಿ
ಹಾಕಿ ಕೊಳೆಯಿಸಬೇಕು. ಇವು ಪ್ಲಾಸ್ಟಿಕ್ ಚೀಲಕ್ಕಿಂತ ಶೇ ೭೦ರಷ್ಟು ಗಾಳಿಯನ್ನು ಹಾಗೂ ಶೇ ೫೦ರಷ್ಟು
ನೀರಿನ ಪ್ರಮಾಣವನ್ನು ಕಲುಷಿತಗೊಳಿಸುತ್ತವೆ. ಅರಣ್ಯ ನಾಶಪಡಿಸುವ ಪೇಪರ್ ಬ್ಯಾಗ್ ಬಳಸುವ ಬದಲು ಪ್ಲಾಸ್ಟಿಕ್
ಅನ್ನೇ ಮರುಬಳಕೆ ಮಾಡಬಹುದ್ಲಲವೇ?
ಎಂಬುದು ಅವರ ವಾದ.
ಕುರುಕುಲು ಎಣ್ಣೆ ತಿಂಡಿಗಳನ್ನು ಪೇಪರ್ ಚೀಲಗಳ್ಲಲಿ ಸಂರಕ್ಷಿಸಿಡಲು ಸಾಧ್ಯವ್ಲಿಲ, ಅದಕ್ಕೆ ಪ್ಲಾಸ್ಟಿಕ್
ಕವರ್‌ಗಳೇ ಬೇಕು. ಹೀಗಾಗಿ ಸಂಪೂರ್ಣ ಪ್ಲಾಸ್ಟಿಕ್ ನಿಷೇಧ ಮಾಡುವ ಯೋಜನೆ ಕೈಬಿಡಲಿ, ಕಾರ್ಮಿಕರ ಬದುಕಿನ ಬಗ್ಗೆಯೂ
ಚಿಂತಿಸಲಿ ಎಂಬುದು ಪ್ಲಾಸ್ಟಿಕ್ ಕಂಪೆನಿಗಳ್ಲಲಿ ಕಾರ್ಯನಿರ್ವಹಿಸುತ್ತಿರುವ ಬಹುತೇಕ ಕಾರ್ಮಿಕರ ಅಳಲು.
ನಿಜವಾದ ಬೆಲೆ ಎಷ್ಟು?
೧೩/೧೬ ಇಂಚಿನ ಒಂದು ಪ್ಲಾಸ್ಟಿಕ್ ಕವರ್ ೮.೨ಗ್ರಾಂ ತೂಗುವುದರಿಂದ ಅದರ ಬೆಲೆ ೧.೧೦ ಪೈಸೆ, ೧೬/೨೦ ಇಂಚಿನ ಕವರ್ ೧೩
ಗ್ರಾಂ ತೂಗುವುದರಿಂದ ಅದರ ಬೆಲೆ ೧.೨೫ ಪೈಸೆ ಆಗಿರುತ್ತದೆ. ಮೂವತ್ತು ಪೈಸೆಯಿಂದ ೧ರೂಪಾಯಿವರೆಗೆ ವ್ಯಾಪಾರಿಗಳು
ಲಾಭಾಂಶ ಇಟ್ಟುಕೊಳ್ಳುವುದರ್‍ಲಲಿ ತಪ್ಪ್ಲಿಲ. ಅದೇ ಕವರ್‌ಗೆ ಮೂರರಿಂದ ಐದು ರೂಪಾಯಿ ಪಡೆದುಕೊಳ್ಳುವುದು
ತಪ್ಪೇ ಎನ್ನುತ್ತಾರೆ ರಾಜ್ಯ ಪ್ಲಾಸ್ಟಿಕ್ ಸಂಘದ ಅಧ್ಯಕ್ಷ ಸುರೇಶ್.
ಪರಿಹಾರ ಏನು?
ಕಸ ವಿಂಗಡಣೆ ಮಾಡದೆ ವಾರಗಟ್ಟಲೇ ರಸ್ತೆ ಬದಿಯ್ಲಲೇ ಸಂಗ್ರಹವಾಗ್ದಿದನ್ನು ನೀವು ಕಂಡಿರಬಹುದು.
ಆಗ್ಲೆಲಾ ಕಾಣಿಸುತ್ತ್ದಿದ್ದುದು ಕೇವಲ ಬಿಳಿ ಇಲವೇ ಕಪ್ಪು ಬಣ್ಣದ ಪ್ಲಾಸ್ಟಿಕ್‌ಗಳು. ಆಹಾರ ಪದಾರ್ಥಗಳಿಗಿಂತಲೂ
ಹೆಚ್ಚಿನ ಮೊತ್ತದ ಪ್ಲಾಸ್ಟಿಕ್ ಕವರ್‌ಗಳು ವಿಲೇವಾರಿ ವೇಳೆಯ್ಲಲಿ ಸಿಗುತ್ತವಂತೆ. ಅದನ್ನು ಎಸೆದು, ಮತ್ತೊಂದು ಕವರ್ ಕೊಳ್ಳುವ
ಬದಲು ಅದನ್ನೇ ಮರುಬಳಕೆ ಮಾಡಿ, ಪರಿಸರ ಉಳಿಸಿ. ವಸ್ತ್ರದಂಗಡಿಯ್ಲಲಿ
ಕೊಡುವ ಪ್ರಿಂಟೆಡ್ ಪ್ಲಾಸ್ಟಿಕ್‌ಗಳನ್ನೂ ಮರುಬಳಕೆ ಮಾಡಿ, ಮಾಲ್‌ಗಳಿಂದ ದಿನನಿತ್ಯದ
ಸಾಮಾನು ತರಲು ಹೋಗುವಾಗ ಅದನ್ನೇ ಕೊಂಡೊಯ್ಯಿರಿ, ಆ ಮೂಲಕ ಹಣವನ್ನೂ ಉಳಿಸಿ ಎಂಬುದು ವ್ಯಾಪಾರಿ ರಾಮ್‌ದಾಸ್ ಅವರ ಸಲಹೆ.
ಮಾಲ್‌ಗಳ್ಲಲಿ ಹೇಗಿದೆ?
ಸುಪ್ರೀಂಕೋರ್ಟ್ ಪ್ಲಾಸ್ಟಿಕ್ ಕೈಚೀಲಗಳಿಗೆ ಅವುಗಳ ತಯಾರಿಕಾ ವೆಚ್ಚವನ್ನು ಗ್ರಾಹಕರಿಂದ ವಸೂಲಿ
ಮಾಡಬಹುದು ಎಂಬ ಕಾನೂನು ಜಾರಿಯಾದ ಬಳಿಕ ನಾವೂ ಸಣ್ಣ ಚೀಲಕ್ಕೆ ಎರಡರಿಂದ ಏಳು ರೂಪಾಯಿವರೆಗೆ ದರ ವಿಧಿಸಿದೆವು.
ಗ್ರಾಹಕರಿಗೆ ಹೊರೆಯಾಗುವುದು ನಮ್ಮ ಉದೇಶವಾಗಿರಲ್ಲಿಲ. ಆ ಮೂಲಕವಾದರೂ ಜಾಗೃತಿ ಬೆಳೆಯಲಿ, ಅವರೇ ಕೈಚೀಲ ತರುವಂತಾಗಲಿ
ಎಂದುಕೊಂಡ್ದಿದೆವು. ಆರಂಭದ ಕೆಲ ದಿನಗಳ್ಲಲಿ ಹೆಚ್ಚಿನ ಮಂದಿ ಮನೆಯಿಂದಲೇ ಪ್ಲಾಸ್ಟಿಕ್ ಇಲವೇ ಸೆಣಬಿನ
ಕೈಚೀಲ ಹಿಡಿದು ಬರುತ್ತ್ದಿದರು. ಆದರೆ ಈಗ ಆ ಸಂಖ್ಯೆ ಕಡಿಮೆಯಾಗಿದೆ. ಒಂದು ಅಂದಾಜಿನ ಪ್ರಕಾರ ನೂರರ್‍ಲಲಿ
ಐದು ಮಂದಿ ಮಾತ್ರ ಕೈಚೀಲ ಹಿಡಿದುಕೊಂಡು ಬರುತ್ತಾರೆ. ಇನ್ನುಳಿದವರು ಹೆಚ್ಚುವರಿ ಹಣತೆತ್ತು ಕೊಳ್ಳುತ್ತಾರೆ, ನಮ್ಮ ಪ್ರಯತ್ನ ಇದರಿಂದ
ಕೈಗೂಡಿದಂತಾಗ್ಲಿಲ ಎಂದು ಬೇಸರಿಸುತ್ತಾರೆ ಪ್ರತಿಷ್ಠಿತ ಮಾಲ್ ಒಂದರ ಮಾರ್ಕೆಟಿಂಗ್ ಅಧಿಕಾರಿ ಮೀನಾ.