Monday, May 11, 2009

ಮೊದಲ ಮಾತು.....

ಸವಿ ನಿನ್ನ ಬ್ಲಾಗ್ ಅಡ್ರೆಸ್ ಕೊಡೇ ಎಂದು ಗೆಳೆಯ ಕಾಲೆಳೆದಾಗಲೇ ಅರಿವಾದದ್ದು ನಾನಿನ್ನೂ ತುಂಬಾ ಹಿಂದುಳಿದಿದ್ದೇನೆಂದು... ಅಂದೇ ನಾನೇನೂ ಕಡಿಮೆಯಿಲ್ಲ ಎಂಬ ಗತ್ತಿನೊಂದಿಗೆ ಸೈಬರ್ಗೆ ತೆರಳಿ ಬ್ಲಾಗ್ ಗಳನ್ನೆಲ್ಲಾ ತಡಕಾಡಿದೆ. ಪಕ್ಕದಲ್ಲಿ ಕುಳಿತಿದ್ದ ಗೆಳತಿ ಒಳ್ಳೆ ಹೆಸರು ಸಿಕ್ಕಿದೆಯಾ ಎಂದಾಗ ಜೋರಾಗಿ ತಲೆಯಾಡಿಸಿಯೂ ಇದ್ದೆ.
ಆದರೆ ಮುಂದೆ ಆದದ್ದೇ ಬೇರೆ...ನನ್ನ ಇಷ್ಟದ ಹೆಸರುಗಳಾದ ಕನಸು, ನಿಸರ್ಗ, ಮೌನ(ನಿ), ದನಿ....ಯಾವ ಹೆಸರೂ ಲಭ್ಯವಿಲ್ಲ. ದಾರಿಕಾಣದೆ ಕೊನೆಗೆ ನನ್ನ ಹೆಸರಿನ ಅರ್ಧಭಾಗವನ್ನು ಇಟ್ಟು ಅದರ ಅರ್ಥವನ್ನು ಇನ್ನರ್ಧ ಭಾಗವಾಗಿಸಿದಾಗ ಮೂಡಿಬಂದ ಚಂದದ ಹೆಸರೇ ಸವಿಸಿಹಿ...
ಕೊನೆಗೂ ಬ್ಲಾಗ್ಏನೋ ತಯಾರಾಯ್ತು... ಆದರೆ ಬರಹ...... ನಿಜವಾದ ಕಷ್ಟ ಆರಂಭವಾದದ್ದೇ ಇಲ್ಲಿ...... ಏನು ಬೇಕಾದರೂ ಬರೀಬಹುದಂತೆ ನಿಂಗಿಷ್ಟ ಬಂದಿದ್ದು ಅಂತ ಯಾರೋ ಹೇಳಿದು ನೆನಪಾಯ್ತು... ಹಾಗಂತ ಬಾಯಿಗೆ ಬಂದಿದ್ದು ಬರ್ಯೋಕಾಗುತ್ತೇ...... ದೂರದ ಗೆಳೆಯನೊಬ್ಬ ನೀ ಸುಮ್ನೆ ಟೈಮ್ ಪಾಸ್ಗೆ ಬರೆಯೋದಾದ್ರೆ ಬ್ಲಾಗ್ ಓಪನ್ ಮಾಡೋದೇ ಬೇಡ... ಬರವಣಿಗೆ ಹಿಂದೆ ಸ್ವಲ್ಪ ಪರಿಶ್ರಮ ಇರಬೇಕು, ಅದೂ ಕಾಣುವಂತೆ... ಎಂದು ಬೆದರಿಕೆ ಹಾಕಿದ್ದ... (ಅವನ ಮಾತು ಎಷ್ಟರಮಟ್ಟಿಗೆ ನಿಜವಾಗುವುದೋ ಇನ್ನು ಕಾದು ನೋಡಬೇಕಷ್ಟೇ...)
ಆಂತೂ ಚೊಚ್ಚಲ ಹೆರಿಗೆಯಂತೆ ಬ್ಲಾಗ್ ತಯಾರಾಗಿದೆ. ತಿಂದ ನೋವು ಮಗುವಿನ ಮುಖ ಕಂಡಾಕ್ಷಣ ಮರೆಯುವಂತೆ ಪಟ್ಟ ಕಷ್ಟ ನೀವು ಓದಿದರೆ ಮಾತ್ರ ಸಾರ್ಥಕ... ಓದಿ, ತಪ್ಪಿದ್ದಲ್ಲಿ ತಿದ್ದಿ, ಗೆಳೆಯರಿಂದ, ಹಿರಿಯರಿಂದ ಬೈಸಿಕೊಳ್ಳುವುದರಲ್ಲೂ ಖುಷಿ ಇದೆ ಅಲ್ಲವೇ...?

14 comments:

  1. This comment has been removed by the author.

    ReplyDelete
  2. Hai beautiful Savi, change the theme make it colorful.

    ReplyDelete
  3. ಓಹ್... ನಿಮ್ಮನ್ನು ಬ್ಲಾಗ್ ಲೋಕದಲ್ಲಿ ನೋಡಿ ಖುಷಿಯಾಯ್ತು...
    ಬರೀರಿ..ಬರಿರಿ...ಬರೀತಾ ಇರಿ...

    ಪರ್ವಾಗಿಲ್ಲ ನಿಮ್ಮ ಮನಸ್ಸಿಗೆ ಏನು ಅನಿಸುತ್ತೋ ಅವನ್ನ ಬರೀರಿ...
    ನಾವು ಓದ್ತೇವೆ...ಒಳ್ಳೆದಾಗ್ಲಿ..

    ReplyDelete
  4. sihimatra alla sihiyondige kahinu irli

    ReplyDelete
  5. ಬ್ಲಾಗ್ ಲೋಕಕ್ಕೆ ಸ್ವಾಗತ ಸವಿ...
    ಸಾಧ್ಯವಾದರೆ ಥೀಮ್ ಬದಲಾಯಿಸಿ. ಅನಿಸಿದ್ದನ್ನ ಬರೆಯುತ್ತಾ ಹೋಗಿ...
    Gud Luck.. ;)

    ReplyDelete
  6. blog lokakke svaagata....akshara preeti nirantaravaagirali....

    ReplyDelete
  7. oh....m k hudgi.chanda bariri.good luck.

    ReplyDelete
  8. namaste.entha marayre.nim blog onchuru miskadilla.yavaga update madodu?

    ReplyDelete