ಇದು ಇತ್ತೀಚಿನ ದುರಂತಗಳಲ್ಲೊಂದು...ಅಂತರ್ಜಾಲ ಮಾಹಿತಿ ಕೇಂದ್ರವಾಗಬೇಕಿತ್ತು, ಸರ್ವ ಪ್ರಶ್ನೆಗಳ ಉತ್ತರ ತಾಣವಾಗಬೇಕಿತ್ತು, ಜ್ಙಾನದ ಆಗರವಾಗಬೇಕಿತ್ತು. ಆದರೆ ವಿದ್ಯಾರ್ಥಿಗಳಿಗೆ ಇದೊಂದು ಟೈಮ್ ಪಾಸ್ ಮಾಧ್ಯಮವಾಗಿದೆ ಎಂಬುದು ಕಷ್ಟವಾದರೂ ಒಪ್ಪಿಕೊಳ್ಳಬೇಕಾದ ವಿಷಯ.
ಇದು ಖಂಡಿತ ತಪ್ಪಲ್ಲ. ವಿದ್ಯಾರ್ಥಿಗಳಿಗೆ ಕಡಿಮೆ ಖರ್ಚಿನಲ್ಲಿ ಉನ್ನತ ಮಟ್ಟದ ವ್ಯಕ್ತಿಗಳೊಂದಿಗೆ ಸುಲಭ ಸಂಪರ್ಕವಿರಿಸಿಕೊಳ್ಳಬಹುದಾದ ಮಾಧ್ಯಮವಿದು. ವಿದೇಶದಲ್ಲಿರುವ ವ್ಯಕ್ತಿಗಳನ್ನು ಒಂದು ಕ್ಲಿಕ್ಗೆ ಸಂಪರ್ಕಿಸಿ ಮಾಹಿತಿ ವಿನಿಮಯ ಮಾಡಿಕೊಳ್ಳಬಹುದಾದ ಸುಲಭ ದಾರಿ ಇಲ್ಲಿದೆ. ಫೋನ್ ಅಥವಾ ಇತರ ಪ್ರಕಾರಗಳಿಗೆ ಹೋಲಿಸಿಇದರೆ ದು ಬಹಳ ಚೀಪ್ ಎಂಬುದೇನೋ ನಿಜ. ಆದರೆ ಇದು 'ಸಿಂಪ್ಲಿ ಚಾಟಿಂಗ್'ಗೆ ಮಾತ್ರ ಸೀಮಿತವಾಗಿರುವುದು ದುರದೃಷ್ಟ.
ಇಲ್ಲಿ ಹೇಳ ಹೊರಟಿರುವುದು ಕೇವಲ ಆರ್ಕುಟ್ ನ ಕತೆ ಮಾತ್ರವಲ್ಲ. ಫೇಸ್ ಬುಕ್, ಟ್ವಿಟ್ಟರ್ ಬಹುತೇಕ ಎಲ್ಲವೂ ಅಷ್ಟೇ. ಸೋಷಿಯಲ್ ನೆಟ್ವರ್ಕಿಂಗ್ ನ ಹೆಸರಿಟ್ಟುಕೊಂಡು ಅತಿರಥ ಮಹಾರಥರನ್ನು ತನ್ನವರಾಗಿಸಿಕೊಳ್ಳುವ ತವಕದಲ್ಲಿವೆ ಅಷ್ಟೆ. ಇತ್ತೀಚೆಗೆ ಶಶಿತರೂರ್ ರ ದನದ ದೊಡ್ಡಿ ಬಹಳ ಪ್ರಾಮುಖ್ಯತೆ ಪಡೆದಿದ್ದು ಇದೇ ಟ್ವಿಟ್ಟರ್ ನಲ್ಲಿ. ಇದು ಇಂಡಿಯನ್ ಟುಡೇನ ಲೀಡ್ ನ್ಯೂಸ್ ಆಗಿಯೂ ಬಹಳ ಸುದ್ದಿ ಪಡೆಯಿತು.
ವಿಷಯವೇನೆಂದರೆ ವಿದ್ಯಾರ್ಥಿಗಳ ಹಾಗೂ ಈ ಸೋಷಿಯಲ್ ನೆಟ್ವರ್ಕಿಂಗ್ ಗಳ ಸಂಬಂಧ ಇತ್ತೀಚೆಗೆ ಬಹಳವೇ ಮಿತಿಮೀರಿದೆ. ಅಲ್ಲಿ ಪರಿಚಯವಾಗುವ ಅನಾಮಿಕ ಗೆಳೆಯರೊಂದಿಗೆ ಗಂಟೆಗಟ್ಟಲೆ ಹರಟುತ್ತಾ ಕೂರುವುದೇ ಇಂದಿನ ಫ್ಯಾಶನ್. ಆ ವ್ಯಕ್ತಿಯ ನಿಜ ಹೆಸರೂ ತಿಳಿಯದೆ ಮುಖ ಪರಿಚಯವೇ ಇಲ್ಲದೆ ಕೆಲ ನಿಮಿಷಗಳಲ್ಲೇ ತರಗತಿಗಳಲ್ಲಿ ಪಕ್ಕ ಕುಳಿತ ಗೆಳತಿಗಿಂತಲೂ ಆತ್ಮೀಯನಾಗಿಬಿಡುತ್ತಾನೆ ಆ ವ್ಯಕ್ತಿ.
ಅನೇಕ ಬುದ್ದಿವಂತ ಹುಡುಗರು ಹುಡುಗಿಯರೆಂದೂ ಹುಡುಗಿಯರು ಹುಡುಗರ ಹೆಸರಿನಲ್ಲಿ ಪ್ರೊಫೈಲ್ ಆರಂಭಿಸಿ, ಸಿಕ್ಕವರೊಂದಿಗೆಲ್ಲಾ ಚಾಟ್ ಮಾಡುತ್ತಾ ಕಾಲಹರಣ ಮಾಡುತ್ತಿರುತ್ತಾರೆ. ಆವರೆನೋ ಸಾಧಿಸಿದಂತೆ ಬೀಗುತ್ತಾ... ತಮ್ಮ ಬಿಡುಸಮಯ ವ್ಯರ್ಥವಾದುದನ್ನು ಮರೆತೇ ಬಿಡುತ್ತಾರೆ. ವೈಯುಕ್ತಿಕ ಪಿಸಿ ಅಥವಾ ಲಾಪ್ಟಾಪ್ ಇದ್ದರಂತೂ ಊಟ ನಿದ್ರೆ ಮರೆತು ಆನ್ಲೈನ್ ಸಂಭಾಷಣೆಯಲ್ಲಿ ತೊಡಗಿರುತ್ತಾರೆ.
ಇಲ್ಲವೆಂದಲ್ಲ... ಕೆಲವಾರು ಜೋಡಿಗಳು ಆನ್ಲೈನ್ನಲ್ಲಿ ಗೆಳೆಯರಾಗಿ ಮದುವೆಯಾಗಿ ಜೊತೆಯಾದದ್ದಿದೆ. ಆದರೆ ಅದು ನೂರರಲ್ಲಿ ಒಂದು ಮಾತ್ರ. ಇನ್ನುಳಿದವೆಲ್ಲಾ ಬರೀ ಮನರಂಜನೆಯ ಒಂದು ಭಾಗ ಅಷ್ಟೇ. ವಿದ್ಯಾರ್ಥಿಗಳೇ ಈ ಚಟಕ್ಕೆ ಆಕರ್ಷಣೆಗೆ ಹೆಚ್ಚು ಬಲಿಯಾಗುತ್ತಿರುವುದು ವಿಪರ್ಯಾಸ.

No comments:
Post a Comment